ಭಕ್ತರ ಆಶಯಕ್ಕೆ ಅಶೋಕ್ ಕುಮಾರ್ ರೈ ನೇತೃತ್ವ.

 

ಪುತ್ತೂರು :  ಸುಮಾರು 800 ವರ್ಷಗಳಿಗಿಂತಲೂ ಅಧಿಕ ಇತಿಹಾಸ ಹೊಂದಿರುವ ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬಲ್ಲಿ ನೆಲೆನಿಂತು ಭಕ್ತರ ಸಕಲ ಕಷ್ಟಗಳನ್ನು ನಿವಾರಿಸುವ ಶ್ರೀ ಮಹಿಷಮರ್ಧಿನಿ ದೇವಿಯ ದೇವಸ್ಥಾನವು ಪುನಃ ಜೀರ್ಣೋಧ್ಧಾರ, ಬ್ರಹ್ಮಕಲಶ ಕಾರ್ಯವು ಊರ ಮತ್ತು ಪರವೂರ ಭಕ್ತರ ಆಶಯದಂತೆ ನಡೆಯಲಿದ್ದು ಇದರ ನೇತೃತ್ವವನ್ನು ಜೀರ್ಣೋಧ್ಧಾರ ಸಮಿತಿ ಅಧ್ಯಕ್ಷರೂ, ಹಲವಾರು ದೇವಸ್ಥಾನಗಳ ಜೀರ್ಣೋಧ್ಧಾರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ ಉದ್ಯಮಿ ಅಶೋಕ್ ಕುಮಾರ್ ರೈ ಕೆ . ಎಸ್. ಇವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ. ನಿರಂಜನ್ ರೈ ಮಠಂತಬೆಟ್ಟು ದೇವಸ್ಥಾನ ದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Mattantabettu
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈ ಸುಮಾರು 2 ಕೋಟಿ ವೆಚ್ಚದಲ್ಲಿ ಜೀರ್ಣೋಧ್ಧಾರ ಕಾರ್ಯಗಳ ಯೋಜನೆ ಮಾಡಲಾಗಿದೆ ಈಗಾಗಲೆ ಸುಮಾರು 40 ಲಕ್ಷ ರೂಪಾಯಿ ಹಣವನ್ನು ಭಕ್ತಾದಿಗಳು ನೀಡುವ ಬಗ್ಗೆ ಒಪ್ಪಿಕೊಂಡಿದ್ದು ಸಮಿತಿಯ 200ಕ್ಕೂ ಹೆಚ್ಚು ಕಾರ್ಯಕರ್ತರು ಧನಸಹಾಯ ಯಾಚಿಸುವ ಜೊತೆಗೆ ಕ್ಷೇತ್ರದ ವಿಶೇಷತೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದರು. ಬ್ರಹ್ಮಕಲಶವು 2020 ರಲ್ಲಿ ನಡೆಯಲಿದ್ದು ದೇವಸ್ಥಾನ ದ ಮುಂದಿರುವ ಚಿನ್ಮಯಿ ವೇದಿಕೆ ಮತ್ತು ಸಭಾಂಗಣದ ವಿಸ್ತರಣೆ , ಪರವೂರಿನ ಭಕ್ತರ ಅನುಕೂಲಕ್ಕೆ ತಕ್ಕಂತೆ 2 ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ . ದೇವಸ್ಥಾನದ ಒಳಾಂಗಣಕ್ಕೆ ಚಾವಣಿ ನಿರ್ಮಿಸಲಾಗುವುದು , ಈ ಕಾರ್ಯದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಕೇಂದ್ರ ದ ಹಾಲಿ ಸಚಿವ , ಮಾಜಿ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ ಗೌರವಧ್ಯಕ್ಷರಾಗಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತು ಮಧ್ಯಮ ಸಮಿತಿ ಮುಖ್ಯಸ್ಥರಾದ ಶ್ರೀ ಜಯಪ್ರಕಾಶ್ ಬದಿನಾರು ಮಾತನಾಡಿ ಕ್ಷೇತ್ರದಲ್ಲಿ ಅಕ್ಟೋಬರ್ 10 ರಂದು ಗುರುವಾರ ಅನುಜ್್ಞ ಕಲಶ ಕಾರ್ಯವು ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು ಅಲ್ಲದೇ ಪತ್ರಿಕೆ /ಮಾಧ್ಯಮ ದ ಕಾರ್ಯಸೂಚಿಯ ಬಗ್ಗೆ ಉಲ್ಲೇಖ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಂಕಪ್ಪ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಪ್ರಮುಖರಾದ ಯೋಗೀಶ್ ಸಾಮಾನಿ ಮಠಂತಬೆಟ್ಟು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!