ಪುತ್ತೂರಲ್ಲಿ “ಕಾವು” ಪಡೆದ ಯಂಗ್ ಬ್ರಿಗೇಡ್

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಕ್ಟೋಬರ್ 5 ರಂದು ಸೇವಾದಳ ಯಂಗ್ ಬ್ರಿಗೇಡ್ ಉದ್ಘಾಟನಾ ಸಮಾರಂಭವು ಪುತ್ತೂರಿನ ಟೌನ್ ಹಾಲ್ ನಲ್ಲಿ ವಿದ್ಯುಕ್ತವಾಗಿ ನಡೆಯಿತು.

Young brigade

ಉದ್ಘಾಟನೆಗೂ ಮೊದಲು ಪುತ್ತೂರಿನ ಗಾಂಧಿ ಕಟ್ಟೆಯ ಬಳಿಯಿಂದ ಮೆರವಣಿಗೆ ಮುಖಾಂತರ ಸುಮಾರು 400ಕ್ಕೂ ಅಧಿಕ ಯಂಗ್ ಬ್ರಿಗೇಡ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾದಯಾತ್ರೆ ನಡೆಸಿದರು.
ಕಾರ್ಯಕ್ರಮದಲ್ಲಿ ನಿಕೇತ್ ರಾಜ್ ಮೌರ್ಯ ದಿಕ್ಷೂಚಿ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Young brigade
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಪ್ರಬಲ ಸಂಘಟಕರೂ ಆದ ” ಶ್ರೀ ಕಾವು ಹೇಮನಾಥ್  ಶೆಟ್ಟಿ” ಮತ್ತು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ “ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ” ಯವರು ಪುತ್ತೂರು ಬ್ಲಾಕ್ ಅಧ್ಯಕ್ಷ ರಂಜಿತ್ ಬಂಗೇರ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಅಭಿಷೇಕ್. ಬಿ ಅವರನ್ನು ತ್ರಿವರ್ಣ ಖಾದಿ ಹಾರ ಹಾಕಿ ಅಭಿನಂದಿಸಿದರು.

Young brigade

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಡಾ. ಬಿ. ರಘು, ಯಂಗ್ ಬ್ರಿಗೇಡ್ ರಾಜ್ಯಧ್ಯಕ್ಷ ಜುನೈದ್ ಪಿ.ಕೆ. , ಕೆಪಿಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರಸಭೆ ಸದಸ್ಯ ರೀಯಾಜ್, ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಇಂಟಕ್ ಕಾರ್ಯದರ್ಶಿ ಜಗದೀಶ್ ಕಜೆ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಹ್ಲಾದ್ ಬಿ , ಪುತ್ತೂರು ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ರೆಹಮಾನ್ ಸಂಪ್ಯ , ಸಂತೋಷ್ ಕೋಡಿಂಬಾಡಿ ಪ್ರಮುಖರಾದ ಲ್ಯಾನ್ಸಿ ಮಸ್ಕರೇನಸ್, ರವಿಪ್ರಸಾದ್ ಶೆಟ್ಟಿ , ಅಮರನಾಥ ಗೌಡ , ಮುಕೇಶ್ ಕೆಮ್ಮಿಂಜೆ , ಸೂತ್ರಬೆಟ್ಟು ಜಗನ್ನಾಥ ರೈ , ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!