ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಸಾರಥ್ಯದಲ್ಲಿ ಒಡ್ಯ ಶಾಲೆಗೆ ಅಡಿಕೆ ತೋಟ ಹಸ್ತಾಂತರ ಉದ್ಯಮಿ ದಿನೇಶ್ ರೈಗೆ ಸನ್ಮಾನ

ಪುತ್ತೂರು : (ನ.02) ಪಾಣಾಜೆ ಒಡ್ಯದಲ್ಲಿರುವ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ ದಿನೇಶ್ ರೈ ಮೊಡಪ್ಪಾಡಿಮೂಲೆರವರು ಕೊಡುಗೆಯಾಗಿ ನೀಡಿದ ಅಡಿಕೆ ತೋಟದ ಹಸ್ತಾಂತರ ಮತ್ತು ಸನ್ಮಾನ ಕಾರ್ಯಕ್ರಮ ನ.1ರಂದು ನಡೆಯಿತು.

Vidyashree trust

ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆರ್ಲಪದವು, ಪಾಣಾಜೆ ಇದರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಡ್ಯ ಶಾಲೆಗೆ ಅಡಿಕೆ ತೋಟ ಕೊಡುಗೆಯಾಗಿ ನೀಡಿದ ಪುತ್ತೂರು ನೆಲ್ಲಿಕಟ್ಟೆಯ ಶ್ರೀಹನುಮಾನ್ ಏಜೆನ್ಸಿಸ್‌ನ ಮಾಲಕ ದಿನೇಶ್ ರೈ ಮೊಡಪ್ಪಾಡಿಮೂಲೆರವರು ಶಾಲಾ ಆವರಣದಲ್ಲಿ ಫಲಕ ಅನಾವರಣಗೊಳಿಸುವ ಮೂಲಕ ಅಡಿಕೆ ತೋಟ ಶಾಲೆಗೆ ಸಮರ್ಪಸಿದರು. ಬಳಿಕ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿನೇಶ್ ರೈ ಮೊಡಪ್ಪಾಡಿಮೂಲೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ, ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು, ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ನಾಯ್ಕ ಕೊಂದಲ್ಕಾನ, ಬೆಟ್ಟಂಪಾಡಿ ಸಿಆರ್‌ಪಿ ಪರಮೇಶ್ವರಿ ಪ್ರಸಾದ್, ದಿನೇಶ್ ರೈ ಮೊಡಪ್ಪಾಡಿಮೂಲೆರವರ ಪತ್ನಿ ರಾಧಿಕಾ ದಿನೇಶ್ ರೈ, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪ್ಪ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗೇಶ್ ಪಾಟಾಳಿ, ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರ ಎ.ಬಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್, ಶ್ರೀಹರಿ ಪಾಣಾಜೆ, ಸೀತಾ ಉದಯ ಭಟ್, ಮನೋಜ್ ಬಪ್ಪಳಿಗೆ, ರಾಧಾಕೃಷ್ಣ ಕೆದಂಬಾಡಿ, ಶಂಕರ್ ರೈ ಬಾಳೆಮೂಲೆ, ಉಮೇಶ್ ರೈ ಗಿಳಿಯಾಲು, ರಮಾನಾಥ ರೈ ಪಡ್ಯಂಬೆಟ್ಟು, ಯಶೋದ ಒಡ್ಯ, ಹರಿಪ್ರಸಾದ್ ಒಡ್ಯ ಮತ್ತು ಜಗದೀಶ್ ಕಜೆ ಭಾಗವಹಿಸಿದ್ದರು.

Vidhyashri panaje

ಶಾಲೆಗೆ ಕೊಡುಗೆ ನೀಡಿದ ಉದ್ಯಮಿ ದಿನೇಶ್ ರೈ ಮೊಡಪ್ಪಾಡಿಮೂಲೆ ಮತ್ತು ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಶ್ರೀಪ್ರಸಾದ್ ಪಾಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ಜನಾರ್ದನ ಅಲ್ಚಾರು ಸ್ವಾಗತಿಸಿ, ಶಿಕ್ಷಕ ಉಸ್ಮಾನ್ ತುಂಬೆ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರೂ ಶಾಲೆಯ ಮಹಾದಾನಿಗಳೂ ಆಗಿರುವ ವೇದಮೂರ್ತಿ ಕೃಷ್ಣಭಟ್ ಬಟ್ಯಮೂಲೆರವರು ಕಾರ್ಯಕ್ರಮ ನಿರೂಪಿಸಿದರು.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!