ವಿಶೇಷ ಪ್ಯಾಕೇಜ್ ಗೆ ಇತರೆ ನೌಕರರನ್ನೂ ಸೇರಿಸುವಂತೆ ಮನವಿ ಮಾಡಲಾಗಿದೆ : ಶಾಸಕ ಕಾಮತ್
ಮಂಗಳೂರು : (ಮೇ.20) ರಾಜ್ಯ ಸರಕಾರ ಘೋಷಿಸಿರುವ ವಿಶೇಷ ಪ್ಯಾಕೇಜಿನಲ್ಲಿ ಇತರೆ ವರ್ಗಗಳ ನೌಕರರನ್ನೂ ಸೇರಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಪ್ಯಾಕೇಜ್ ನಲ್ಲಿ ಇತರೆ ವರ್ಗಗಳನ್ನೂ ಕೂಡ ಸೇರಿಸುವಂತೆ ಮುಖ್ಯ ಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ.

Advertisement
ಕೋವಿಡ್ ಮಹಾಮಾರಿಯಿಂದ ಹೋಟೆಲ್ ಕಾರ್ಮಿಕರು, ಬಸ್ ನೌಕರರು, ಬೀಡಿ ಕಾರ್ಮಿಕರು, ಕ್ಯಾಟರಿಂಗ್ ಕಾರ್ಮಿಕರು, ಗೇರುಬೀಜ ಕಾರ್ಮಿಕರು, ಟೈಲರಿಂಗ್, ಲೈಟಿಂಗ್ – ಸೌಂಡ್ ಸಿಸ್ಟಮ್ ಕಾರ್ಮಿಕರೂ ಸೇರಿದಂತೆ ಇತರೆ ವರ್ಗದ ಕಾರ್ಮಿಕರನ್ನೂ ಕೂಡ ವಿಶೇಷ ಪ್ಯಾಕೇಜ್ ನಲ್ಲಿ ಸೇರಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.