ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಅಭಿಯಾನಕ್ಕೆ ಚಾಲನೆ.
ಪುತ್ತೂರು : ( ಮೇ.17) ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ). ಇದರ ಸಹಕಾರದೊಂದಿಗೆ ನಡೆದ ರಕ್ತದಾನ ಅಭಿಯಾನಕ್ಕೆ ಇಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ಇಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕರಾದ ಕಾವು ಹೇಮನಾಥ್ ಶೆಟ್ಟಿ ಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ದೇಶದಲ್ಲಿ ನಡೆಯುತ್ತಿರುವ ಕೋರೋನಾ ಎನ್ನುವ ಮಹಾಮಾರಿಯ ಅಟ್ಟಹಾಸದ ನಡುವೆ ಜನ ಆಕ್ಸಿಜನ್ , ವೆಂಟಿಲೇಟರ್, ಬೆಡ್ ಗಳು ಸಿಗದೇ ಸಾಯುತ್ತಿದ್ದು ಹಲವು ಸಮಸ್ಯೆಗಳ ಸುಲಿಯಲ್ಲಿ ಸಿಲುಕಿರುವಾಗ, ಕೋರೋನಾ ಭಾಧಿತರು ಹಾಗೂ ಇನ್ನಿತರ ಸಮಸ್ಯೆಯಿಂದಾಗಿ ರಕ್ತದ ಕೊರತೆ ಉಂಟಾಗದ ರೀತಿಯಲ್ಲಿ ಪುತ್ತೂರಿನ ಯುವಕ ಕಾಂಗ್ರೆಸ್ ನ ಈ ನಡೆ ಅತ್ಯುತ್ತಮ ನಡೆಯಾಗಿದೆ ಎಂದು ಹೇಳಿ ಯುವ ಕಾಂಗ್ರೆಸ್ ನ ಕಾರ್ಯವನ್ನು ಶ್ಲಾಘಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಉಪಾಧ್ಯಕ್ಷರಾದ
ಲ್ಯಾನ್ಸಿ ಮಸ್ಕರೇನಸ್, ರೋಟರಿ ಅಧ್ಯಕ್ಷರಾದ ಗ್ಸೇವಿಯಾರ್ ಡಿ’ಸೋಜ, ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ , ಮಾಜಿ ಕಾರ್ಯದರ್ಶಿ
ರವಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನದ್ ಯೂಸುಫ್ , ಗ್ರಾಮ ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಯುವ ಕಾಂಗ್ರೆಸ್ ಮುಖಂಡರಾದ ಹಂಝತ್ ಸಾಲ್ಮರ, ಮೋನು ಬಪ್ಪಳಿಗೆ, ಇಂಮ್ತಿಯಾಝ್ ಬಪ್ಪಳಿಗೆ, ಹನೀಫ್ ಪುಂಚಾತ್ತರ್, ರಶೀದ್ ಮುರ, ರವಿಚಂದ್ರ ಆಚಾರ್ಯ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಇಫಾಝ್ ಉಪಸ್ಥಿತರಿದ್ದರು.

Advertisement
ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ , ಕೆಪಿಸಿಸಿ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ಅಶೋಕ್ ಶೆಟ್ಟಿ, ಪುತ್ತೂರು ಸಾಮಾಜಿಕ ಜಾಲತಾಣದ ಸಂಚಾಲಕ ಜಗದೀಶ್ ಕಜೆ, ಶಮೀಮ್ ಗಾಳಿಮುಖ, ಇರ್ಫಾಝ್ ಇರ್ದೆ, ಶರತ್, ಮಹಮ್ಮದ್ ಅಶ್ರಫ್, ಜಿತೇಶ್ ರಕ್ತದಾನ ಮಾಡಿದರು. ಈ ರಕ್ತದಾನ ಅಭಿಯಾನವು ನಿರಂತರವಾಗಿ ನಡೆಯಲಿದ್ದು ಈಗಾಗಲೇ ಹಲವು ಹೆಸರುಗಳು ಯುವಕ ಕಾಂಗ್ರೆಸ್ ನಲ್ಲಿ ನೋಂದಾಯಿಸಲ್ಪಟ್ಟಿದ್ದು ತುರ್ತು ರಕ್ತದ ಅವಶ್ಯಕತೆಯಿದ್ದಲ್ಲಿ ಯುವ ಕಾಂಗ್ರೆಸ್ ನ ಸದಸ್ಯರು ಸಿದ್ದರಿರುವ ಮೂಲಕ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪ್ರಸಾದ್ ಎನ್ ತಿಳಿಸಿದ್ದಾರೆ.