ಇತಿಹಾಸವನ್ನು ಅರಿತು ನಡೆದರೆ ದೇಶ ಅಭಿವೃದ್ಧಿ : NSUI ಸ್ಥಾಪನ ದಿನಾಚರಣೆಯಲ್ಲಿ ಮಹಮ್ಮದ್ ಬಡಗನ್ನೂರು.

ಪುತ್ತೂರು : (ಏ.09) ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಎನ್ ಎಸ್ ಯು ಐ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ನಾವೆಲ್ಲರೂ ಇತಿಹಾಸವನ್ನು ಅರಿತು ನಡೆದರೆ ದೇಶ ಅಭಿವೃದ್ಧಿ ಸಾಧ್ಯ. ಶಾಂತಿ ನೆಮ್ಮದಿಯ ಬದುಕು ಇಂದಿನ ಜನರಿಗೆ ಅತೀ ಅವಶ್ಯಕವಾದುದು. ಸನ್ಮಾನ್ಯ ಇಂದಿರಾ ಗಾಂಧಿಯವರು ಸುಮಾರು 50 ವರ್ಷಗಳ ಹಿಂದೆ ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಬೆಳೆಯಬೇಕು. ತಮಗೆ ಬೇಕಾದ್ದನ್ನು ಕೇಳುವ, ಕೇಳಿ ಹಕ್ಕಿನಲ್ಲಿ ಪಡೆದುಕೊಳ್ಳುವ ಶಕ್ತಿ ಕ್ರೂಢೀಕರಣ ಆಗಬೇಕು ಎಂಬ ನಿಟ್ಟಿನಲ್ಲಿ ಎನ್ ಎಸ್ ಯು ಐ ಸಂಘಟನೆ ಪಾರಂಭಿಸಿದರು. ಇಂದು ಈ ಸಂಘಟನೆ ಬೃಹದಾಕಾರವಾಗಿ ಬೆಳೆದಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದರು.

Nsui puttur
ಎನ್ ಎಸ್ ಯು ಐ ನಾಯಕತ್ವ ಗುಣವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದು ಇನ್ನಷ್ಟು ಸಮಾಜ ಮುಖಿಯಾಗಿ ಬೆಳೆಯಬೇಕು. ಇದಕ್ಕೆ ನಮ್ಮಿಂದ ಏನು ಬೇಕಾದರೂ ಸಹಕಾರ ಕೊಡಲು ಸಿದ್ದ ಎಂದು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವರು ಹೇಳಿದರು.

ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಿಷ್ಟರಾಗಿ ಎಂಬ ನಾರಾಯಣ ಗುರುವಿನ ಮಾತಿನಂತೆ ವಿದ್ಯಾರ್ಥಿಗಳು ಓದುವುದನ್ನು ನಿಯತ್ತಾಗಿ ಮಾಡಿ, ಜೊತೆ ಜೊತೆಗೆ ಸಮಾಜ‌ ಮುಖಿ ಚಿಂತನೆಯೊಂದಿಗೆ ಸಂಘಟನೆಯನ್ನು ಬಲಪಡಿಸಬೇಕು. ಎಲ್ಲಾ ಜಾತಿ ಧರ್ಮ ದವರ ಒಗ್ಗೂಡುವಿಕೆಯ ಈ ಎನ್ ಎಸ್ ಯು ಐ ಸಂಘಟನೆಯನ್ನು ನೀವು ಸೇರಿರುವುದು ಮತ್ತು ನನಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹೇಳಿದರು.

ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ ಪ್ರಸ್ತಾವಿಕವಾಗಿ ಮಾತನಾಡಿದರು. ಎನ್ ಎಸ್ ಯು ಐ ಅಧ್ಯಕ್ಷ ಕೌಶಿಕ್ ಗೌಡ ಧ್ವಜಾರೋಹಣ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಾಜಿ‌ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಗಂಗಾಧರ ಶೆಟ್ಟಿ, ತಮೀಝ್, ಬಾತಿಷ್, ಜಾನ್ ಸಿರಿಲ್ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!