ನಾವು ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ : ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಕರೆ

ಹೋಸಪೇಟೆ : (ನ.22) ‘ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ನಾವೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ. ಇದಕ್ಕಾಗಿ ನಾನು ಇಲ್ಲಿಂದ ಪ್ರವಾಸ ಆರಂಭ ಮಾಡಿದ್ದು, ಇದು ಕಾಂಗ್ರೆಸ್ ಪಾಲಿಗೆ ವಿಜಯದ ನಡೆಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Hospete

ಭಾನುವಾರ ಹೊಸಪೇಟೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಶಾಸಕರು, ಪರಾಜಿತರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರ ಶ್ರಮ ಇಂದು ಇಲ್ಲಿ ಸೇರಿದ್ದನ್ನು ನೋಡಿದರೆ ತಿಳಿಯುತ್ತದೆ. ಎಲ್ಲಾ ಹಂತದ ನಾಯಕರು ಜನರನ್ನು ಸೇರಿಸುತ್ತಾರೆ. ಆದರೆ ಪಕ್ಷದ ಬಲವರ್ಧನೆ ಆಗುತ್ತಿಲ್ಲ. ಈಗ ಇರುವ ಆತ್ಮವಿಶ್ವಾಸ ಬರುವ ಚುನಾವಣೆಗಳಲ್ಲಿ ಇರಬೇಕು. ಜಿಲ್ಲೆಯ ಹತ್ತೂ ಕ್ಷೇತ್ರಗಳಲ್ಲೀ ಪಕ್ಷ ಗೆಲ್ಲುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯ ಕಾಂಗ್ರೆಸ್ ಗೆ ಬಳ್ಳಾರಿ ಕಾರ್ಯಕರ್ತರು ತೋರಿಸಿದ್ದೀರಿ. ನಮ್ಮದು ಕೇಡರ್ ಬೇಸ್ ಪಾರ್ಟಿ ಆಗಬೇಕಿದೆ. ಆ ಮೂಲಕ ಇನ್ನಷ್ಟೂ ಪಕ್ಷ ಗಟ್ಟಿ ಆಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

Hospete

‘ಕೆಪಿಸಿಸಿ ಅಧ್ಯಕ್ಷನಾದರೂ ಓರ್ವ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯಲು ನಾನು ಸಿದ್ಧ. ನಮ್ಮಗಳ ಚುನಾವಣೆ ವೇಳೆ ನಮ್ಮ ಗೆಲುವಿಗಾಗಿ ನೀವು ಹೇಗೆ ಶ್ರಮಿಸುತ್ತೀರೋ ಅದೇ ರೀತಿ ಮುಂಬರುವ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಚುನಾವಣೆಗಳಲ್ಲಿ ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದರು.

‘ಉಪಚುನಾಣೆಗಳಲ್ಲಿ ಕಾಂಗ್ರೆಸ್ ಗೆ ಆದ ಸೋಲನ್ನು ಒಪ್ಪಿಕೊಳ್ಳೋಣ. ಆ ಚುನಾವಣೆಗಳಲ್ಲಿ ಪಕ್ಷ ಯಾಕೆ ಸೋತಿತು ಎಂದು ಚಿಂತಿಸಬೇಡಿ. ಅದರ ಕುರಿತು ನಾವು ತೀರ್ಮಾನ ಮಾಡುತ್ತೇವೆ. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲೂ ಎಲ್ಲಾ ಹಂತದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಸಮಾಧಾನ ತರಿಸಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ ಫಲವಾಗಿ ಉಗ್ರಪ್ಪ ಲಕ್ಷ ಓಟುಗಳ ಅಂತರದಿಂದ ಗೆದ್ದರು. ಇದಕ್ಕೆಲ್ಲ ನಿಮ್ಮ ಶ್ರಮವೇ ಕಾರಣ. ಬೈ ಎಲೆಕ್ಷನ್ ಗಳಲ್ಲಿ ನಮಗೆ ಬೇಕಾದ ಅಧಿಕಾರಿಗಳ, ಕಾರ್ಯಕರ್ತರ ಸೇರಿ ವಿವಿಧ ಶಕ್ತಿಗಳು ನಮಗೆ ಎಷ್ಟರಮಟ್ಟಿಗೆ ಸಿಗುತ್ತವೆ ಎಂದು ಗೊತ್ತಿರುವ ವಿಷಯ’ ಎಂದರು.

Hospete

‘ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬರುವ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಾನು ತೀರ್ಮಾನ ಮಾಡಲ್ಲ. ನೀವೇ ತೀರ್ಮಾನ ಮಾಡಿ ಸೂಚಿಸಿದ ಹೆಸರಿನವರಿಗೆ ಟಿಕೆಟ್ ಕೊಡುತ್ತೇವೆ. ಕೆಳ ಹಂತದಿಂದ ಲೋಕಸಭಾ ಚುನಾವಣೆಗಳಲ್ಲಿ ಶ್ರಮವಹಿಸಿ ಚುನಾವಣೆ ನಡೆಸದೇ ಕೇವಲ ನಾಯಕರ ಬಾಲ ಹಿಡಿದು ಟಿಕೆಟ್ ಕೇಳಿದರೆ ಅದಕ್ಕೆ ರಾಹುಲ್ ಗಾಂಧಿ ಅವಕಾಶ ಕೊಡಲ್ಲ ಎಂದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!