ಎಸ್.ಎಸ್.ಎಲ್.ಸಿ ಪ್ರಥಮಸ್ಥಾನಿ ಅನುಷ್ ಬಿ.ಎಲ್ ಗೆ ಸುಬ್ರಹ್ಮಣ್ಯದಲ್ಲಿ ಸನ್ಮಾನ.

ಸುಬ್ರಹ್ಮಣ್ಯ : (ಅ..14) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) B C ಟ್ರಸ್ಟ್ ಸುಬ್ರಹ್ಮಣ್ಯ, ಯೇನೆಕಲ್ಲ ಒಕ್ಕೂಟ ದ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಗ್ರಾಮೀಣ ಪ್ರತಿಭೆ ಅನುಷ್ ಎ.ಎಲ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 14/08/2020 ನೇ ಶುಕ್ರವಾರದಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು. ಅಭಿನಂದನೆಯನ್ನು ವಲಯ ಮೇಲ್ವಿಚಾರಕರಾದ ಸೀತಾರಾಮ ಮತ್ತು ಒಕ್ಕೂಟದ ಅಧ್ಯಕ್ಷರು ತೇಜಕುಮಾರ್ ಮತ್ತು ತುಳುನಾಡು ರಕ್ಷಣಾ ವೇದಿಕೆ ಸುಳ್ಯ ಇದರ ಕಾರ್ಯದರ್ಶಿ ಸುರೇಶ್ ಉಜಿರಡ್ಕ ಫಲ ಪುಷ್ಪ ನೀಡಿ ಗೌರವಿಸಿದರು.

Subrhamnya self help
ಈ ಸಂದರ್ಭದಲ್ಲಿ ವಿಧ್ಯಾರ್ಥಿ ಅನುಷ್ ರವರ ತಂದೆ-ತಾಯಿ, ವಿಜಯವಾಣಿ ಪತ್ರಿಕಾ ವರದಿಗಾರ ರತ್ನಾಕರ ಎಸ್, ಪ್ರಜಾವಾಣಿ ಪತ್ರಿಕಾ ವರದಿಗಾರ ಲೋಕೇಶ್ ಬಿ.ಎನ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರಘು ಬಿ.ಎನ್, ಲೋಕೇಶ್ ಯೇನೆಕಲ್ಲು, ಆನಂದ ಕಲ್ಲಪಣೆ, ರಾಮಚಂದ್ರ ಯೇನೆಕಲ್ಲು, ಒಕ್ಕೂಟದ ಪದಾಧಿಕಾರಿಗಳಾದ ಗುರುಪ್ರಸಾದ್ ದೇವರಗದ್ದೆ, ಶೈಲಜಾ, ಜಯಶ್ರೀ, ಲಲಿತಾ, ಪವಿತ್ರ, ಮಂಜುಳಾ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸೇವಾ ಪ್ರತಿನಿಧಿ ಹರೀಣಾಕ್ಷಿ ಸ್ವಾಗತಿಸಿ, ಯೇನೆಕಲ್ಲ ಸೇವಾ ಪ್ರತಿನಿಧಿ ತಾರಾ ಧನ್ಯವಾದಗಳನ್ನು ಹೇಳಿದರು.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!