ರಾಹುಲ್ ಗಾಂಧಿ ಹುಟ್ಟು ಹಬ್ಬ ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಸಾಮಾಜಿಕ ಜಾಲತಾಣ ವಿಭಾಗ

ಪುತ್ತೂರು : (ಜೂ.21) ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗವು ರಾಹುಲ್ ಗಾಂಧಿ ಹುಟ್ಟುಹಬ್ಬವನ್ನು ಕಾವು ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಕೊಡುವ ಮೂಲಕ ನಗರಸಭೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

City corporation

ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ : ಕಾವು ಹೇಮನಾಥ್ ಶೆಟ್ಟಿ

ಕಾರ್ಯಕ್ರಮದಲ್ಲಿ ಮಾತನಾಡಿದ ಕಾವು ಹೇಮನಾಥ್ ಶೆಟ್ಟಿ ಅವರು ನಮ್ಮ ನಾಯಕ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿಯವರು ಕೊರೋನಾ ಸಮಸ್ಯೆ ದೇಶದಲ್ಲೆಡೆ ಇರುವುದರಿಂದ ನನ್ನ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಬಾರದು ನೀವೇನಾದರು ಮಾಡಬೇಕೆಂದಿದ್ದರೆ ಸಂಕಷ್ಟದಲ್ಲಿರುವ ಜನರಿಗೆ ಉಪಯುಕ್ತವಾಗುವಂತಹ ಕಾರ್ಯಕ್ರಮ ಮಾಡಬೇಕೆಂದು ಹೇಳಿದರು. ಆದ್ದರಿಂದ ನಗರ ಸಭೆಯಲ್ಲಿ ಪೌರಕಾರ್ಮಿಕರ ಕೆಲಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಈ ಪೌರಕಾರ್ಮಿಕರಿಂದಾಗಿ ಇಂದು ನಗರಸಭೆಯ ಜನರು ನೆಮ್ಮದಿಯಿಂದ ಇದ್ದಾರೆ. ಆದ್ದರಿಂದ ಅವರನ್ನು ಗುರುತಿಸಿ, ಅವರನ್ನು ಸಮಾಜ ಯಾವಾಗಲೂ ನೆನಪಿಸುತ್ತದೆ ಎಂದು ತಿಳಿಸಲು ಮತ್ತು ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಸಾಮಾನ್ಯ ಜನರ ಮುಖದಲ್ಲಿ ಮಂದಹಾಸ ತರುವಂತಹ ಕಾರ್ಯಕ್ರಮ ಆಗಬೇಕೆಂಬುದು ನಮ್ಮ ಉದ್ದೇಶ ಆದ್ದರಿಂದ ಪೌರಕಾರ್ಮಿಕರಿಗೆ ನಮ್ಮ ಪಕ್ಷದ ವತಿಯಿಂದ ಕಿಟ್ ವಿತರಣೆ ಮಾಡುತ್ತಿದ್ದೇವೆ. ಈ ಮೂಲಕ ಸಮಾಜದ ಎಲ್ಲರೂ ಸಮಾನರು ಎನ್ನುವುದನ್ನು ತಿಳಿಯಬೇಕಿದೆ ಎಂದರು.

ರಾಹುಲ್ ಗಾಂಧಿಯವರ ಕುಟುಂಬ ಈ ದೇಶಕ್ಕಾಗಿ ಬಲಿದಾನಗೈದಿದೆ : ಯು ಲೋಕೇಶ್ ಹೆಗ್ಡೆ

City corporation
ರಾಹುಲ್ ಗಾಂಧಿಯವರು ದೇಶದ ಸಾಮಾನ್ಯ ಜನರ ಸಂಕಷ್ಟಕ್ಕೆ ನಿತ್ಯ ತುಡಿಯುವ ಮನಸ್ಸು ಹೊಂದಿರುವ ಅಪರೂಪದ ವ್ಯಕ್ತಿ. ಅವರ ಅಜ್ಜಿ, ತಂದೆ, ಚಿಕ್ಕಪ್ಪ ಈ ದೇಶದಕ್ಕಾಗಿ ಬಲಿದಾನಗೊಂಡವರು. ಭವಿಷ್ಯದಲ್ಲಿ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿರುವವರು. ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ ಎಂದರು.

ಪೌರಕಾರ್ಮಿಕರು ನಮಗಾಗಿ ತ್ಯಾಗ ಮನೋಭಾವನೆಯಿಂದ ದುಡಿಯುವವರು : ರೂಪಾ ಶೆಟ್ಟಿ ಪೌರಾಯುಕ್ತೆ.

ನಮ್ಮ ಸಮಾಜದ ನೆಮ್ಮದಿಯಿಂದ ಇರಬೇಕಾದರೆ ಪೌರ ಕಾರ್ಮಿಕರ ಸೇವೆ ಸ್ಮರಣೀಯ. ಅವರು ಸೇವೆಯನ್ನು ಗುರುತಿಸುವುದು ಅಗತ್ಯ. ಅವರನ್ನು ಗುರುತಿಸಿದ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಟೀಂ ಗೆ ಕೃತಜ್ಞತೆಗಳು. ಇಂತಹ ಒಳ್ಳೆಯ ಕೆಲಸಗಳು ನಿಮ್ಮಿಂದ ಇನ್ನುಮುಂದೆಯೂ ನಡೆಯಲಿ ಎಂದು ಹೇಳಿದರು.

City corporation
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಬಿನ್ ತಾವ್ರೊ , ಮಾಜಿ ಸದಸ್ಯರಾದ ಅನ್ವರ್ ಖಾಸಿಂ, ಮುಕೇಶ್ ಕೆಮ್ಮಿಂಜೆ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಬಪ್ಪಳ್ತಿಗೆ ಕಿಟ್ಟಣ್ಣ ಗೌಡ, ಪುತ್ತೂರು ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ರಾಜ್ಯ ಕೊಂಕಣಿ ಅಕಾಡೆಮಿ ಮಾಜಿ ಸದಸ್ಯ ಧಾಮೋಧರ್ ಭಂಡರ್ಕಾರ್, ಅಶ್ರಯ ಸಮಿತಿ ಮಾಜಿ ಸದಸ್ಯ ಅಶ್ವಿನಿ ಚಂದ್ರಶೇಖರ್, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೆಮ್ಮಾಯಿ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ಆಚಾರ್ಯ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಬೆದ್ರಾಳ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಸ್ಕರ್ ಆಲಿ, ಮಾಜಿ ಪುರಸಭಾ ಸದಸ್ಯ ಇಸ್ಮಾಯಿಲ್ ಸಾಲ್ಮರ, ಜಿಲ್ಲಾ ಯುವಕ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಕಾರ್ಯದರ್ಶಿ ಹನೀಫ್ ಪುಂಚತ್ತಾರು, ಹಂಝತ್, ಉದ್ಯಮಿ ಹಂಝ ಹಾಜಿ, ಕೇಶವ ಸುವರ್ಣ, ಗಗನ್ ಶೆಟ್ಟಿ, ನಜೀರ್ ಬಲ್ನಾಡ್, ಕಿರಣ್ ಕುಮಾರ್, ತಿಲಕ್ ರಾಜ್ ಶೆಟ್ಟಿ, ಅಚ್ಚು ಕೆಮ್ಮಾಯಿ.

ನಗರಸಭೆ ಆರೋಗ್ಯ ಅಧಿಕಾರಿ ಶ್ವೇತಾ ಕಿರಣ್ ಶೆಟ್ಟಿ, ರಾಮಚಂದ್ರ, ಪರಿಸರ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ಕೆಪಿಸಿಸಿ ಸೋಷಿಯಲ್ ಮೀಡಿಯಾ ರಾಜ್ಯ ಕಾರ್ಯದರ್ಶಿ ಕೆಸಿ ಅಶೋಕ್ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರ ಸೋಷಿಯಲ್ ಮೀಡಿಯಾ ಸಹಸಂಚಾಲಕರಾದ ರೆಹಮಾನ್ ಸಂಪ್ಯ, ಉಪಸ್ಥಿತರಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಪುತ್ತೂರು ಸಾಮಾಜಿಕ ಜಾಲತಾಣ ಸಂಚಾಲಕ ಜಗದೀಶ್ ಕಜೆ ವಂದಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!