ನಟ ಚಿರಂಜೀವಿ ಸರ್ಜಾ ಪಾರ್ಥಿವ ಶರೀರಕ್ಕೆ ಡಿ.ಕೆ. ಶಿವಕುಮಾರ್ ಅಂತಿಮ ನಮನ

Dk shivakumar

ಬೆಂಗಳೂರು : (ಜೂ.07) ಅಕಾಲಿಕ ಮರಣಕ್ಕೆ ಒಳಗಾದ ಚಿತ್ರನಟ ಚಿರಂಜೀವಿ ಸರ್ಜಾ ಅವರ ಬಸವನಗುಡಿ ನಿವಾಸಕ್ಕೆ ಭಾನುವಾರ ರಾತ್ರಿ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.

Dk shivakumar

ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಶಿವಕುಮಾರ್ ಅವರು, “ಸಾವು ಎಲ್ಲರಿಗೂ ನಿಶ್ಚಯ. ಅಫಘಾತವೋ, ಇನ್ಯಾವುದೋ ಸುದೀರ್ಘ ಗಂಭೀರ ಕಾಯಿಲೆಯೋ ಆಗಿದಿದ್ದರೆ ಏನೋ ಆಗಿ ಹೋಯಿತು ಅನ್ನಬಹುದಿತ್ತು. ಆದರೆ, ಬದುಕಿ, ಬಾಳಬೇಕಾದ ಚಿರಂಜೀವಿ ಸರ್ಜಾ ಅವರು ಅತೀ ಸಣ್ಣ ವಯಸ್ಸಿನಲ್ಲಿ ಹಠಾತ್ ಸಾವನ್ನಪ್ಪಿರುವುದು ಅತೀವ ನೋವು ತಂದಿದೆ. ಅದನ್ನು ನಂಬಲು ಆಗುತ್ತಿಲ್ಲ. ಇದು ಆಗಬಾರದಿತ್ತು” ಎಂದು ಕಂಬನಿ ಮಿಡಿದರು.

Dk shivakumar

“ನಾನು ಚಿರಂಜೀವಿ ಅವರನ್ನು ಹತ್ತಿರದಿಂದ ಬಲ್ಲೆ. ಹಲವಾರು ಬಾರೀ ಅವರನ್ನು ಭೇಟಿ ಮಾಡಿದ್ದೇನೆ. ಅವರೊಡನೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಸಾವು ಎಲ್ಲರಿಗೂ ನಿಶ್ಚಿತ. ಆದರೆ ಚಿರಂಜೀವಿ ಅವರಿಗೆ ಇಂಥ ದುರ್ಮರಣ ಬರಬಾರದಿತ್ತು” ಎಂದು ಅವರು ನೋವು ವ್ಯಕ್ತಪಡಿಸಿದರು. ಚಿರಂಜೀವಿ ಸರ್ಜಾ ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!