ಕಾವು ಹೇಮನಾಥ್ ಶೆಟ್ಟಿ ದಂಪತಿ ನೇತೃತ್ವದಲ್ಲಿ ಕೊಳ್ತಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಗತ್ಯ ಆಹಾರ ಪದಾರ್ಥಗಳ ಕಿಟ್ ವಿತರಣೆ

 

ಪುತ್ತೂರು : (ಮೇ.02) ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮತ್ತು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಕಾಂಗ್ರೆಸ್ ನ ಪಂಚಾಯತ್ ಸದಸ್ಯರು ತಾಲೂಕು ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರ ಒಗ್ಗುಡುವಿಕೆಯಲ್ಲಿ ಕೊಳ್ತಿಗೆ ಗ್ರಾಮದ ಹಲವು ಕುಟುಂಬ ಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯನ್ನು ಅವರವರ ಮನೆಗಳಿಗೆ ಮೇ 02 ರಂದು ಶನಿವಾರ ತಲುಪಿಸಿ ಕೊಡಲಾಯಿತು.

Hemanath shetty kavu
ಈ ಸಂದರ್ಭದಲ್ಲಿ ಬೆಳ್ಳಾರೆ ಠಾಣಾ ಪೋಲಿಸ್ ನಿರೀಕ್ಷಕರರಾದ ಆಂಜನೇಯ ರೆಡ್ಡಿ, ತಾಲೂಕು ಪಂಚಾಯತ್ ಸದಸ್ಯ ರಾಮಾ ಪಾಂಬಾರ್, ಕೊಳ್ತಿಗೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಸಂತ ರೈ ದುಗ್ಗಲ, ಮಾಜಿ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಕಾಂಗ್ರೆಸ್ ನಾಯಕರಾದ ಎಸ್ ವೆಂಕಟ್ರಮಣ ಗೌಡ, ಶ್ಯಾಮ ಸುಂದರ ರೈ, ಕಾಂಗ್ರೆಸ್ ಸಾಮಾಜಿಕ‌ ಜಾಲತಾಣದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಸಿ‌. ಅಶೋಕ್ ಶೆಟ್ಟಿ, ಇಂಟಕ್ ರಾಜ್ಯ ಉಪಾಧ್ಯಕ್ಷರಾದ ಪ್ರದೀಪ್ ರೈ ಪಾಂಬಾರ್, ಗ್ರಾಮ ಪಂಚಾಯತ್ ಸದಸ್ಯರಾದ ಭರತ್ ಕೆಮ್ಮಾರ, ಬಾಲಕೃಷ್ಣ ಗೌಡ ಕೆಮ್ಮಾರ, ಪವನ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕೊಳ್ತಿಗೆ, ಗಫೂರ್ ಸಾಹೇಬ್, ಮಾರ್ಷಲ್ ಡಿಸೋಜ, ಮತ್ತಿತರರು ಜತೆಗಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!