ಇಂದು 11 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಿದ ಜನತೆ ಸೇವಾ ಟ್ರಸ್ಟ್.

ಪುತ್ತೂರು : (ಮಾ.26) ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಆಗಿ ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವ ಬಡ ಕಾರ್ಮಿಕ ವರ್ಗದ ಜನರನ್ನು ಗುರುತಿಸಿ ಅವರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಹಸ್ತ ಚಾಚುತ್ತಿರುವ “ಜನತೆ ಸೇವಾ ಟ್ರಸ್ಟ್” ಇಂದು

Janathe seva trust

ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಕೊರಗರ ಕಾಲನಿಯಲ್ಲಿ ಆಹಾರ ವಿತರಣೆ

ಪುತ್ತೂರು ತಾಲೂಕಿನ ಸಾಲ್ಮರ, ಪುತ್ತೂರು ಕಸಬಾ, ಕೆಮ್ಮಾಯಿ, ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಸುಮಾರು 11 ಬಡ ಕಾರ್ಮಿಕ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಿ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮದ ಗ್ರಾಮ ಕಾರಣೀಕರಾದ ಶ್ರೀ ಚಂದ್ರ ನಾಯಕ್ ರವರು ಜನರಿಗೆ ಕೊರೋನಾ ವೈರಸ್ ಹರಡುವ ಬಗ್ಗೆ ಮತ್ತು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಜನರಿಗೆ ತಿಳಿಯಪಡಿಸಿದರು.

Janathe seva trust

ಕೆಮ್ಮಾಯಿ ಸಮೀಪ ಆಹಾರ ಪದಾರ್ಥಗಳ ವಿತರಣೆ

ಆಹಾರ ಪದಾರ್ಥಗಳನ್ನು ವಿತರಿಸುವ ಸಂದರ್ಭದಲ್ಲಿ ಜನತೆ ಸೇವಾ ಟ್ರಸ್ಟ್ ನ ಪ್ರಮುಖರಾದ ಜಗದೀಶ್ ಕಜೆ, ನಿಶಾದ್ ಡಿ ಕೆ, ತೇಜ ಕುಮಾರ್, ಮತ್ತು ಸ್ಥಳೀಯ ನಿವಾಸಿಗಳಾದ ಬಾತೀಶ್, ಉಬೈದ್, ರಶೀದ್ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!