ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೆ ತಲೈವಾ? ರಾಜಕೀಯಕ್ಕೆ ಎಂಟ್ರಿ ದೃಢಪಡಿಸಿದ ನಟ ರಜನೀಕಾಂತ್.

ಚೆನೈ : (ಮಾ.12) ಕಾಲಿವುಡ್​ ಸೂಪರ್​ಸ್ಟಾರ್ ನಟ ರಜನೀಕಾಂತ್​ ರಾಜಕೀಯಕ್ಕೆ ಇಳಿಯಲು ಸಿದ್ಧರಾಗಿದ್ದು ಗುರುವಾರ ಇದನ್ನು ದೃಢಪಡಿಸಿದ್ದಾರೆ. ಆದರೆ ಇನ್ನೂ ತಮ್ಮ ರಾಜಕೀಯ ಪಕ್ಷ ಹಾಗೂ ಅದರ ಉದ್ಘಾಟನೆ ದಿನವನ್ನು ಬಹಿರಂಗಪಡಿಸಲಿಲ್ಲ.
ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜನೀಕಾಂತ್​, ರಾಜಕೀಯದಲ್ಲಿ ವಯಸ್ಸಿನ ಮಿತಿ ಹಾಗೂ ಶಿಕ್ಷಣಗಳು ನಿರ್ಣಾಯಕ ಅಂಶಗಳಾಗಿವೆ. ಹಾಗಾಗಿ ನನ್ನ ಪಕ್ಷದಲ್ಲಿ ಹೊಸಬರಿಗೆ, ವಿದ್ಯಾವಂತರಿಗೆ ಹಾಗೂ ಯುವಕರಿಗೆ ಅವಕಾಶ ಕೊಡುತ್ತೇನೆ. ಅದರಲ್ಲೂ ಗೌರವಾನ್ವಿತರಿಗೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

Rajanikanth

ನನಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕು ಎಂಬ ಯಾವ ಆಸೆಯೂ ಇಲ್ಲ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು ರಾಜಕೀಯಕ್ಕೆ ಬಂದು ಪಕ್ಷ ಕಟ್ಟುತ್ತಿಲ್ಲ. ನನ್ನ ಪಕ್ಷದಲ್ಲಿ ನನ್ನೊಂದಿಗೆ ಕೆಲವೇ ನಾಯಕರು ಕೆಲಸ ಮಾಡಲಿದ್ದಾರೆ. ಒಂದು ಸಮರ್ಥ ಪಕ್ಷದ ನಾಯಕ ಕೂಡ ರಾಜ್ಯವನ್ನು ಆಳಬಲ್ಲ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರುವುದಷ್ಟೇ ನನ್ನ ಉದ್ದೇಶ ಎಂದು ರಜನೀಕಾಂತ್​ ಅವರು ತಿಳಿಸಿದ್ದಾರೆ.

ತಮಿಳುನಾಡಿನ ರಾಜಕೀಯದಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ತುಂಬ ಪ್ರಭಾವಿಗಳಾಗಿದ್ದರು. ಅವರೇ ಬೇಕು ಎಂದು ಜನರು ಮತ ಹಾಕುತ್ತಿದ್ದರು. ಆದರೆ ಈಗ ಅವರಿಲ್ಲ. ಒಂದು ನಿರ್ವಾತ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ. ಮತ್ತೆ ಆ ಜಾಗವನ್ನು ತುಂಬಬೇಕು. ಹಾಗಾಗಿ ಒಂದು ಬದಲಾವಣೆ ತರಲು ಹೊಸ ಚಳವಳಿಯೊಂದನ್ನು ಪ್ರಾರಂಭಿಸುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ. ತಾವು ರಾಜಕೀಯಕ್ಕೆ ಇಳಿಯುವುದಾಗಿ 2017ರ ಡಿಸೆಂಬರ್​ನಲ್ಲೇ ರಜನೀಕಾಂತ್​ ಅವರು ಘೋಷಣೆ ಮಾಡಿದ್ದರು. ನಾನು ಯುದ್ಧಕ್ಕೆ ಇಳಿಯುತ್ತಿದ್ದೇನೆ, ಹೋರಾಟಕ್ಕೆ ಸಿದ್ಧರಾಗಿ ಎಂದು ಚೆನ್ನೈನಲ್ಲಿ ಅಭಿಮಾನಿಗಳ ಎದುರು ಹೇಳಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!