ಶಂಕಿತ ಕರೋನಾ ಭೀತಿಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿ

ಹುಬ್ಬಳ್ಳಿ : (ಫೆ.03) ಮಾರಕ ಕರೋನಾ ವೈರಸ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ. ಕೇಶ್ವಾಪೂರದ ಸಂದೀಪ್ ಎಂಬ ಯುವಕನಿಗೆ ಶಂಕಿತ ಕರೋನ ವೈರಸ್ ಪತ್ತೆಯಾಗಿದ್ದು, ನಗರದ ಕಿಮ್ಸ್ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Corona virus

ಸಂದೀಪ್ ಚೀನಾದಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಜನವರಿ 19ರಂದು ಬೆಂಗಳೂರಿಗೆ ಆಗಮಿಸಿದ್ದರು. ಕಳೆದ 15ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಾರೆ. ನಿನ್ನೆ ಜ್ವರ ಬಂದಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೇ, ಇವರು ಚೀನಾದಿಂದ ಆಗಮಿಸಿದ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಸಂಗ್ರಹಿಸಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ವೈರಾಜಲಿಗೆ ರವಾನಿಸಲಾಗಿದೆ. ವರದಿಗಾಗಿ ಕಿಮ್ಸ್ ವೈದ್ಯರು ಕಾಯುತ್ತಿದ್ದಾರೆ. ಸೊಂಕು ಶಂಕೆ ಹಿನ್ನಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!