5 ಕೋಟಿಗೂ ಅಧಿಕ ಜನರಿಂದ ಮಾನವ ಸರಪಳಿ : ಬಿಹಾರದಲ್ಲಿ ವಿಶ್ವದಾಖಲೆ

ಬಿಹಾರ : (ಜ.21) ನೀರು, ಅರಣ್ಯ ರಕ್ಷಣೆ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರದಲ್ಲಿ ಐದು ಕೋಟಿಗೂ ಅಧಿಕ ಜನರು 18 ಸಾವಿರ ಕಿ.ಮೀ ಗೂ ಹೆಚ್ಚು ದೂರದವರೆಗೆ ಮಾನವ ಸರಪಳಿ ನಿರ್ಮಿಸಿ ಲಿಮ್ಕಾ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

Human chain protest

ಸತತ ಮೂರನೇ ವರ್ಷ ಆಯೋಜನೆ ಮಾಡುತ್ತಿರುವ ಇಂತಹ ಒಂದು ಅಭೂತಪೂರ್ವ ಜಾಗೃತಿ ಕಾರ್ಯಕ್ರಮದಲ್ಲಿ ಬರೋಬ್ಬರಿ 5.16 ಕೋಟಿ ಜನರು ಸುಮಾರು 18 ಸಾವಿರದ 34 ಕಿ.ಮೀ ಮಾನವ ಸರಪಳಿ ನಿರ್ಮಿಸಿ ಲಿಮ್ಕಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸುಮಾರು 57.76 ಲಕ್ಷ ವಿದ್ಯಾರ್ಥಿಗಳು, 43,445 ಕೈದಿಗಳು ಸೇರಿ ರಾಜ್ಯಾದ್ಯಂತ ಕೋಟ್ಯಂತರ ಜನರು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ 11.30ರಿಂದ 12 ಗಂಟೆಯವರೆಗೆ ನಡೆದ ಈ ವಿಶ್ವದಾಖಲೆಯ ಮಾನವ ಸರಪಳಿಯು ಇಲ್ಲಿಯವರೆಗೆ ಅತಿ ಹೆಚ್ಚು ಜನರನ್ನು ಒಳಗೊಂಡ ಜನಜಾಗೃತಿಯ ಸರಪಳಿ ಎನಿಸಿಕೊಂಡಿದೆ.

Human chain protest

2017ರಲ್ಲಿ 3.5 ಕೋಟಿ ಜನರು 11,292 ಕಿ.ಮೀ ಹಾಗೂ 2018ರಲ್ಲಿ ಸುಮಾರು 4 ಕೋಟಿ ಜನರು, 14 ಸಾವಿರ ಕಿ.ಮೀ ಮಾನವ ಸರಪಳಿ ನಿರ್ಮಿಸಿದ್ದರು. ಈ ಬಾರಿಯ ಸರಪಳಿಯು ಹಿಂದಿನ ದಾಖಲೆಗಳನ್ನು ಮುರಿದಿದ್ದು, ಖುದ್ದು ಮುಖ್ಯಂಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾಗಿಯಾಗಿದ್ದರು.

Human chain protest

ಕಾರ್ಯಕ್ರಮ ಆಯೋಜನೆಗಾಗಿ ಏಳು ಹೆಲಿಕಾಪ್ಟರ್, ನೂರಕ್ಕೂ ಅಧಿಕ ಡ್ರೋಣ್ ಗಳನ್ನು ಬಳಸಲಾಗಿತ್ತು. ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆಗೆ ಕಾರಣವಾದ ಈ ಅಭಿಯಾನದಲ್ಲಿ ಇಬ್ಬರು ಶಿಕ್ಷಕರು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ

CATEGORIES
TAGS
Share This

COMMENTS

Wordpress (0)
Disqus ( )
error: Content is protected !!