ಪುತ್ತೂರು ಜೆಜೆಸಿ ಅಧ್ಯಕ್ಷರಾಗಿ ದಿವಿತ್ ಯು.ರೈ

ಪುತ್ತೂರು : (ಡಿ.21) ಪುತ್ತೂರಿನ ಪ್ರತಿಷ್ಠಿತ ಜೆಸಿಐ ಯ ಯುವ ಸಂಸ್ಥೆ ಜೂನಿಯರ್ ಜೆಸಿಐ ಯ ಅಧ್ಯಕ್ಷರಾಗಿ ಫಿಲೋಮಿನ ಕಾಲೇಜು ವಿದ್ಯಾರ್ಥಿ ದಿವಿತ್ ಯು ರೈ ಆಯ್ಕೆಯಾಗಿದ್ದಾರೆ.
ತನ್ನ 8 ನೇ ತರಗತಿಯ ವ್ಯಾಸಂಗ ನಡೆಸುತ್ತಿದ್ದಾಗ ಹಾರಾಡಿ ಸರಕಾರಿ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ತಡೆಯಲು ರಾಜ್ಯ ಗೃಹಮಂತ್ರಿ ಡಾ| ಜಿ. ಪರಮೇಶ್ವರ್ ರವರಿಗೆ ಕರೆ ಮಾಡಿ ವರ್ಗಾವಣೆ ರದ್ದುಗೋಳಿಸುವಲ್ಲಿ ಯಶಸ್ಸು ಕಂಡು ಸುದ್ದಿಯಾಗಿದ್ದ ದಿವಿತ್. ತನ್ನ ಶಾಲೆಗೆ ₹ 10 ಲಕ್ಷ ಅನುದಾನವನ್ನೂ ಪಡೆದಿದ್ದ.

ದಿವಿತ್ ಯು ರೈ
ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಡ್ಯೂ ಡ್ರಾಪ್ಸ್ ಎಂಬ ಆಂಗ್ಲ ಕವನ ಸಂಕಲನ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ ಈತ ಪ್ರೌಢ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಭ್ಯಸಿಸಿ ಎರಡನೇ ಕವನ ಸಂಕಲನ ಸಿಂಪಲ್ ಲೈಫ್ ಬಿಡುಗಡೆಗೊಂಡಿದೆ. ಮೂರನೇ ಕವನ ಸಂಕಲನ ತನ್ನ ಕಾಲೇಜಿನಲ್ಲಿ ಬಿಡುಗಡೆಗೆ ಸಿದ್ದಗೊಂಡಿದೆ.

Advertising

ಜಪಾನ್ ನಲ್ಲಿ ನಲ್ಲಿ ನಡೆದ ಸ್ಕೌಟ್ ಕ್ಯಾಂಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಾಟಕ, ಭರತನಾಟ್ಯ, ಫಿಲ್ಮ್ ಡ್ಯಾನ್, ಯಕ್ಷಗಾನ ಹೀಗೆ ಹತ್ತು ಹಲವು ರೀತಿಯ ಸಾಹಿತ್ಯ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ರವಿವಾರ (22-12-2019) ಜೆಸಿಐ ಯ ಯುವ ಸಂಸ್ಥೆ ಜೆಜೆಸಿ ಯ ಅಧ್ಯಕ್ಷರಾಗಿ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!