ಬಾಲಮೇಳ , ಸ್ತ್ರೀ ಶಕ್ತಿ ಸಂಘಗಳ ಸಮಾವೇಶ ದ ಪ್ರಯುಕ್ತ ಕಜೆ ಅಂಗನವಾಡಿಯಲ್ಲಿ ಕ್ರೀಡಾಕೂಟ

ಪುತ್ತೂರು : (ನ.24) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ, ಹಿರಿಯ ವಿಧ್ಯಾರ್ಥಿ ಸಂಘ, ಕಿಶೋರಿ ಸಂಘ ಕೋಡಿಂಬಾಡಿ ಕಜೆ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25/12/2019 ಬುಧವಾರ ಕೋಡಿಂಬಾಡಿ ಕಜೆ ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಬಾಲಮೇಳ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಮಾವೇಶ ದ ಪ್ರಯುಕ್ತ ನವಂಬರ್ 24 ರ ಆದಿತ್ಯವಾರದಂದು ಅಂಗನವಾಡಿ ವ್ಯಾಪ್ತಿಯ ಎಲ್ಲಾರಿಗೂ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು.

Kaje anganavadi

ಕಾರ್ಯಕ್ರಮದ ಉದ್ಘಾಟನೆಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಬು ಗೌಡ ಬಂಡಾರದ ಮನೆ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜೆ ಅಂಗನವಾಡಿ ಕೇಂದ್ರ ದ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅರುಣ ಶೇಖರ ಪೂಜಾರಿ ನಿಡ್ಯ ವಹಿಸಿದ್ದರು.

Advertising

ವೇದಿಕೆಯಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ ಶ್ರೀ. ಕೇಶವ ಭಂಡಾರಿ ಕೈಪ , ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ. ಯತೀಶ್ ಗೌಡ ಬಾರ್ತಿಕುಮೇರು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಮುಖೇಶ್, ಹಿರಿಯ ವಿಧ್ಯಾರ್ಥಿ ಸಂಘದ ನಾಯಕ ಜಗದೀಶ್ ಕಜೆ ಉಪಸ್ಥಿತರಿದ್ದರು. ಕಾರ್ಯಕ್ರಮವು ಅಂಗನವಾಡಿಯ ಪುಟಾಣಿ ಮಕ್ಕಳು ನಾಡಗೀತೆ ಹಾಡುವುದರೊಂದಿಗೆ ಚಾಲನೆ ನೀಡಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯೆ ತುಳಸಿ ಕಜೆ ಅತಿಥಿಗಳಿಗೆ ಸ್ವಾಗತಿಸಿದರು, ಕಿಶೋರಿ ಸಂಘದ ಅಧ್ಯಕ್ಷೆ ಕುಮಾರಿ ಕವಿತ ಕೈಪ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಯಶೋದ ಬಾರ್ತಿಕುಮೇರು ಕಾರ್ಯಕ್ರಮವನ್ನು ನಿರ್ವಹಿಸಿದರು.

Kaje anganavadi

ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಭಾಕರ್ ಸಾಲ್ಯನ್, ಗಿರಿಯಪ್ಪ ಕಜೆ , ಸಂಪತ್ ಗೌಡ, ಅಣ್ಣು ಪೂಜಾರಿ ಕೈಪ, ಜಗದೀಶ್ ನಾಯಕ್, ದೀಕ್ಷಿತ್ ಕೈಪ, ಶಿವಪ್ರಸಾದ್ ಕಜೆ , ಸುಂದರ ಕಜೆ, ಶ್ರೀಮತಿ ಸುಶೀಲ ಕೈಪ, ಶ್ರೀಮತಿ ಸುಂದರಿ ನಿಡ್ಯ, ಶ್ರೀಮತಿ ವಾರಿಜ ಡೆಕ್ಕಾಜೆ , ಶ್ರೀಮತಿ ಪ್ರೇಮ , ಪವನ್, ಶಾಶ್ವತ್ ಪರನೀರು, ರಕ್ಷಾ, ಅನನ್ಯ, ಅಂಗನವಾಡಿ ಸಹಾಯಕಿ ಶ್ರೀಮತಿ ಪುಷ್ಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!