ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ನೈತಿಕ , ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆ ಮತ್ತು ಸಾಧಕರಿಗೆ ಸನ್ಮಾನ,

ಪುತ್ತೂರು : (ನ.5)  ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಂತಿವನ‌ ಟ್ರಸ್ಟ್ (ರಿ) ಧರ್ಮಸ್ಥಳ, ಲಯನ್ಸ್ ಕ್ಲಬ್ ಪುತ್ತೂರು ಕಾವು,ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಯೋಗದೊಂದಿಗೆ ಇಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ನೈತಿಕ ಮತ್ತು ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆ ಮತ್ತು ಸಾಧಕರಿಗೆ ಸನ್ಮಾನ ಮತ್ತು ವಿಶ್ವ ಶಾಂತಿಗಾಗಿ ಚಿತ್ರ ಬಿಡುಗಡೆ ಕಾರ್ಯಕ್ರಮವು ನಡೆಯಿತು.

Sanjeeva mattandur
ಪುತ್ತೂರು ಶಾಸಕರು ಶ್ರೀ ಸಂಜೀವ ಮಠಂದೂರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮತ್ತೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನೈತಿಕ‌ ಶಿಕ್ಷಣ ಇದ್ದು ನೈತಿಕ ಮೌಲ್ಯಾಧರಿತ ಜೀವನ ನಡರಸಿದರೆ ವಿಶ್ವವೇ ಶಾಂತಿಯಿಂದ ಮುಂದುವರಿಯಲಿದೆ. ನಾವು ಇವತ್ತು ನಮ್ಮ ಮಾರ್ಗದರ್ಶಕರನ್ನು ಗಮನಿಸುತ್ತಿದ್ದೇವೆ ಅವರು ನೈತಿಕ ಮೌಲ್ಯಾಧರಿತವಾಗಿ ಬದುಕಿರುವುದು ನಮಗೆ ಪ್ರೇರಣೆಯಾಗಬೇಕು ಎಂದರು. ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

Kavu Hemanath
ಪುತ್ತೂರು ಕಾವು ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಶ್ರೀ. ಹೇಮನಾಥ್ ಶೆಟ್ಟಿ ಕಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಶಾಂತಿವನ‌ ಟ್ರಸ್ಟ್ ಇಂದು ಉತ್ತಮ ಕೆಲಸ ಮಾಡುತ್ತಿದೆ. ನೈತಿಕ ಶಿಕ್ಷಣ , ಯೋಗ ನಮ್ಮ ಆರೋಗ್ಯ ಮತ್ತು ಶಾಂತಿಯುತ ಸಮಾಜದ ಸೃಷ್ಠಿಗೆ ಪೂರಕವಾಗಿದೆ ಎಂದು ಅಭಿಪ್ರಾಯಿಸಿದರು. ನಮ್ಮ ಶಿಕ್ಷಕರು ನೈತಿಕ ಮೌಲ್ಯಯುತ ಶಿಕ್ಷಣ ನೀಡುವುದರಿಂದಲೇ ಮಕ್ಕಳು ಕೂಡಾ ಉತ್ತಮ‌ ಸಾಧಕ ವಿದ್ಯಾರ್ಥಿಗಳಾಗಿ ಸಮಾಜ ಮುಂದೆ ತೋರಿಸಿಕೊಳ್ತಿದ್ದಾರೆ ಎಂದು ಹೇಳಿದರು. ನಾವು ನಾಲ್ಕು ಜನ‌ಸಾಧಕರನ್ನು ಗೌರವಿಸಿದ್ದೇವೆ. ಅವರೆಲ್ಲರೂ ಅವರ ವ್ಯಾಪ್ತಿಯಲ್ಲಿ ಯಾವುದೇ ಕಪ್ಪು ಚುಕ್ಕೆಗಳಿಲ್ಲದ ಸಾಧಕರು ಎಂಬ ಖುಷಿಯಿದೆ ಎಂದು ಹೇಳಿದರು.

Lions club

ಉಪರಾಜ್ಯಪಾಲರು- 317D ಲಯನ್ಸ್ ಕ್ಲಬ್ ದ.ಕ
ಶ್ರೀ ವಸಂತಕುಮಾರ್ ಶೆಟ್ಟಿ ವಿಶ್ವ ಶಾಂತಿಗಾಗಿ ಪಯಣ ಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಸ್ಪರ್ದೆಗಳಲ್ಲಿ ಗೆಲ್ಲುವದೇ ಉದ್ದೇಶ ಎಂದು ತಿಳಿದುಕೊಂಡು ಸಾಧನೆಗೆ ಹೊರಟಿರುವುದು ಮೌಲ್ಯಗಳ ಕೊರತೆಗೆ ಕಾರಣವಾಗಿರಬಹುದು. ನಾವು ಸ್ಪರ್ಧಾತ್ಮಕವಾಗಿ ಭಾಗಿಸುವುದೇ ನಮ್ಮ ಉದ್ದೇಶವಾಗಿದ್ದರೆ ಮೌಲ್ಯಗಳು ಉಳಿಯಲು ಸಾಧ್ಯ. ಲಯನ್ಸ್ ಕ್ಲಬ್ ವತಿಯಿಂದ ಸುಮಾರು 200 ಶಾಲೆಗಳಲ್ಲಿ ಮಕ್ಕಳಿಗಾಗಿ‌ ವಿಶ್ವದಲ್ಲಿಯೇ ಶಾಂತಿ ಮೂಡಿಸಲು ಸ್ಪರ್ಧೆ ಏರ್ಪಡಿಸಲಾಗಿದೆ. ಮಕ್ಕಳ ಮನಸಲ್ಲಿ ಶಾಂತಿ ಬೇಕು ಎಂಬುದು ಮನದಟ್ಟಾಗಿ ಮುಂದಿನ ಪೀಳಿಗೆಯನ್ನು ಅದಕ್ಕೆ ತಯಾರು ಮಾಡುವುದು ಇದರ ಉದ್ದೇಶ ಎಂದು ಅವರು ಹೇಳಿದರು.

ಶ್ರೀ ದಯಾನಂದ ರೈ ಮನವಳಿಕೆ ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಸತೀಶ್ ರೈ ಮುಖ್ಯೋಪಾಧ್ಯಾಯರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ.ಪುತ್ತೂರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ರಮೇಶ್ ರೈ ಸಾಂತ್ಯ, ಖಜಾಂಜಿ ಲ.ಕೃಷ್ಣಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Lions club
ಶ್ರೀ ಮನೋಹರ ರೈ ನಿವೃತ್ತ ಮುಖ್ಯಗುರುಗಳು‌ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇವರು ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನು ಹೇಳಿದರು.

Lions club
ಶ್ರೀಮತಿ ಹಾನಾ ಮುರುಗನ್ ಸೀನಿಯರ್ ಕನ್ಸಲ್ಟೆಂಟ್ LLF ಬೆಂಗಳೂರು, ಶ್ರೀ ಪದ್ಮನಾಭ ರೈ ನಿವೃತ್ತ ಶಿಕ್ಷಕರು ಕರ್ನೂರು ಬೆದ್ರಾಡಿ , ಶ್ರೀಮತಿ ಸುನಿತಾ ದೈಹಿಕ ಶಿಕ್ಷಕಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಮತ್ತು ಶ್ರೀ ನಾಗೇಶ್ ಕೆ. ತಾಲೂಕು ಕಛೇರಿ ಪುತ್ತೂರು ಸನ್ಮಾನ ಸ್ವೀಕರಿಸಿದರು. ಡಾ. ಐ. ಶಶಿಕಾಂತ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಣ್ಣ ರೈ ಸ್ವಾಗತಿಸಿದರು.
ಶ್ರೀಮತಿ ರೂಪಕಲಾ ವಂದಿಸಿದರು.

 

ವರದಿ : ರವಿಪ್ರಸಾದ್ ಶೆಟ್ಟಿ ಬನ್ನೂರು

CATEGORIES
Share This

COMMENTS

Wordpress (0)
Disqus (0 )
error: Content is protected !!