ಲಯನ್ಸ್ ವತಿಯಿಂದ ಸಾಧಕರಿಗೆ ಸನ್ಮಾನ

ಪುತ್ತೂರು : (ಅ.27) ಪುತ್ತೂರು ಕಾವು ಲಯನ್ಸ್ ಕ್ಲಬ್ ವತಿಯಿಂದ ಮೂವರು ಸಾಧಕರ ಸನ್ಮಾನ‌ ಕಾರ್ಯಕ್ರಮ ಕಾವು ಬುಶ್ರಾ ಶಾಲೆಯ ಸಭಾಂಗಣದಲ್ಲಿ ನಡೆಯಿತು.

Hemanath shetty
ಪುತ್ತೂರು ತಾಲೂಕು ಕಛೇರಿಯಲ್ಲಿ 15 ವರ್ಷಗಳ‌ ಕಾಲ ಅಕ್ರಮ ಸಕ್ರಮ ಶಾಖೆಯಲ್ಲಿದ್ದು ಸುಮಾರು 17000 ಕ್ಕಿಂತಲೂ ಹೆಚ್ಚಿನ‌ ಕಡತ ವಿಲೇವಾರಿ,12300 ಫಲಾನುಭವಿಗಳ ಸೇವೆ, ಹಕ್ಕುಪತ್ರ ವಿತರಣೆಯಲ್ಲಿ ಭಾಗಿ. ಉಳಿದ ಅವಧಿಗಳಲ್ಲಿ ಚುನಾವಣಾ ಶಾಖೆಯಲ್ಲಿ ನಿಸ್ವಾರ್ಥ ಮತ್ತು ನಿಷ್ಕಳಂಕ ಸೇವೆ ಸಲ್ಲಿಸುತ್ತಿರುವ ನಾಗೇಶ್ ಕೆ , ಅಜ್ಜಾವರ ನಿವಾಸಿ ಅಡಿಕೆ ವ್ಯಾಪಾರಿಯಾಗಿದ್ದು ಇದೀಗ ಆದೂರು ತಂಙಳ್ ಅವರ ಆಶೀರ್ವಾದದಿಂದ , ಬಂಜೆತನ , ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಪ್ರಾರ್ಥಿಸಿದ ನೀರು ನೀಡುವ ಮೂಲಕ ವಾಸಿಗೊಳಿಸಿ ಹೆಸರುವಾಸಿಯಾಗಿರುವ  ಸಾಂಪ್ರದಾಯಿಕ ವೈದ್ಯರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅಬ್ದುಲ್ ಕುಂಞಿ ,
ತಾಳೆ ಕೃಷಿಯಲ್ಲಿ, ಅಗರ್ ಮರ ಬೆಳೆಯುವಲ್ಲಿ ಮಹತ್ತರ ಸಾಧನೆ , ಕೃಷಿ ಚಟುವಟಿಕೆಗೆ ಬೇಕಾದ ಯಂತ್ರಗಳ ನಿರ್ಮಾಣ ಸಾಧಕ ಕೃಷಿ‌ ಚಟುವಟಿಕೆಯೊಂದಿಗೆ, ಬಿಳಿ ಸೆರಗು, ಸುಟ್ಟ ಗಾಯಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವ ಮೂಲಕ ನಾಟಿ ವೈದ್ಯರಾಗಿ ಹಲವಾರು ಜನರ ಸಂಕಷ್ಟಕ್ಕೆ ಸ್ಪಂದಿಸಿ ಜನ ಖ್ಯಾತಿಗೊಳಿಸಿರುವ ಬಟ್ಯಡ್ಕ ಶ್ಯಾಮ ಸುಂದರ ಭಟ್ ಅವರನ್ನು ಗೌರವಾದರಗಳಿಂದ ಲ.ಮಾಧವ ಗೌಡ ಜಾಕೆ, ಲಯನ್ ಪ್ರಾಂತೀಯ ಅಧ್ಯಕ್ಷ ಲ. ಕೃಷ್ಣ ಪ್ರಶಾಂತ್ , ವಲಯ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಲ.ಗಣೇಶ್ ಶೆಟ್ಟಿ , ಸನ್ಮಾನಿಸಿದರು.
ವಲಯ ಸಮಾವೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲ.ಹೇಮನಾಥ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವಲಯ ಅಧ್ಯಕ್ಷ ಆನಂದ ರೈ, ವಿಟ್ಲ ಲಯನ್ಸ್ ಅಧ್ಯಕ್ಷ ಲ. ಸಂತೋಷ್ ಕುಮಾರ್ ಶೆಟ್ಟಿ, ಪುತ್ತೂರು ಲಯನ್ಸ್ ಕಾರ್ಯದರ್ಶಿ ಲ.ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!