ಟಿಪ್ಪು ಜಯಂತಿ ನಾವೇ ಆಚರಿಸುತ್ತೆವೆ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ.

ಬೆಂಗಳೂರು : (ಅ.25) ಹೋಸಕೋಟೆ ಟಿಪ್ಪು ಜಯಂತಿ ನಾವೇ ಆಚರಣೆ ಮಾಡುತ್ತೇವೆ ಎಂದು  ಚಿಕ್ಕಬಳ್ಳಾಪುರ  ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್​ ಬಚ್ಚೇಗೌಡ ಅವರು ಶುಕ್ರವಾರ ಹೇಳಿದರು.

Sharath bacchegowda
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಆಯೋಜಿಸಿದ್ದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ಬಾರಿ ನನಗೆ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸಾಕಷ್ಟು ಜನ ಹೇಳಿದರು. ಆದರೆ, ಈ ಬಾರಿಯ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡುತ್ತೇವೆ ಎಂದು ಅವರು ತಿಳಿಸಿದರು.

Sharath bacchegowda
ಇನ್ನು ಪಕ್ಕದ ತಮ್ಮರಸನಹಳ್ಳಿಯಲ್ಲಿ ಟಿಪ್ಪು ಜಯಂತಿಯನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಂತೆ ಶರತ್ ಬಚ್ಚೇಗೌಡ ಅವರ ಮೇಲೆ ಅಭಿಮಾನಿಗಳು ಹಣ ಸುರಿದು ಹರ್ಷ ವ್ಯಕ್ತಪಡಿಸಿದರು.

CATEGORIES
Share This

COMMENTS

Wordpress (0)
Disqus (0 )
error: Content is protected !!