“ಸತ್ಯ ಪ್ರಮಾಣ”ಕ್ಕೆ ರಾಜು ಹೊಸ್ಮಠ ಆಹ್ವಾನ.

ಪುತ್ತೂರು :(ಅ.23) ಕಳೆದ ಕೆಲವು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಕೌಡಿಚ್ಚಾರ್ ಎಂಬಲ್ಲಿ ದಲಿತ ಅಪ್ರಾಪ್ತ ಬಾಲಕಿ ಕು. ಆಶಾ, ಮತ್ತು ಆನಂದ , ಪುಷ್ಪಾ ದಂಪತಿಯ ಮೇಲೆ ಚಿನ್ನ ಕದ್ದ ಆರೋಪ ಮಾಡಿ ಪೋಲೀಸ್ ದೌರ್ಜನ್ಯಕ್ಕೆ ಸಾಕ್ಷಿಯಾದ ಕೌಡಿಚ್ಚಾರ್ ನ ಮುಮ್ತಾಜ್ ಕುಟಂಬವು ನಂತರ ಕದ್ದ ಚಿನ್ನವು ಜಿಲ್ಲಾ ದಲಿತ್ ಸೇವಾ ಸಮಿತಿ ಉಪಾಧ್ಯಕ್ಷರಾದ ರಾಜು ಹೊಸ್ಮಠ ರ ಹತ್ತಿರ ಇದೆ ರಾಜು ಹೊಸ್ಮಠ ರವರು ಕಾನತ್ತೂರಿನಲ್ಲಿ ಸತ್ಯ ಪ್ರಮಾಣಕ್ಕೆ ಬರಲಿ ಎಂದು ಹೇಳಿದ್ದರು.

Raju hosmata

ಆದರೆ ಸುಮಾರು ದಿನಗಳು ಕಳೆದರೂ ಆರೋಪ ಮಾಡಿದ ಮುಮ್ತಾಜ್ ಮತ್ತು ಕಾನತ್ತೂರು ಕ್ಷೇತ್ರದಿಂದ ಕೂಡ ಯಾವೂದೇ ರೀತಿಯ ನೋಟಿಸ್ ರಾಜು ಹೊಸ್ಮಠ ರವರಿಗೆ ಬಾರದ ಕಾರಣ ಸ್ವತಃ ರಾಜು ಹೊಸ್ಮಠ ರವರು ದೌರ್ಜನ್ಯಗೋಳಪಟ್ಟ ಕುಟುಂಬದ ಜೊತೆ ಕಳೆದ ಅದಿತ್ಯವಾರ 20ರಂದು  ಶ್ರೀ ಕ್ಷೇತ್ರ ಕಾನತ್ತೂರಿಗೆ ಹೋಗಿ ಅಲ್ಲಿ ಆರೋಪ ದ ಬಗ್ಗೆ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ವಿಷಯ ಪ್ರಸ್ತಾಪಿಸಿದ ನಂತರ ವಿಶೇಷ ಪ್ರಾರ್ಥನೆ ಮಾಡಿ ಆರೋಪ ಮಾಡಿದ ಮುಮ್ತಾಜ್ ರವರು ಶ್ರೀ ಕ್ಷೇತ್ರ ಕಾನತ್ತೂರಿನಲ್ಲಿ ಪ್ರಮಾಣಕ್ಕೆ ಬರುವಂತೆ ಆಹ್ವಾನ  ಪತ್ರಿಕಾ ಪ್ರಕಟಣೆ ಮುುಖಾಂತರ ನೀಡಿರುತ್ತಾರೆ. ಅಲ್ಲದೆ ಪೋಲೀಸ್ ಇಲಾಖೆಯು ಈ ಕಳ್ಳತನದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Raju hosmata
ಶ್ರೀ ಕ್ಷೇತ್ರ ಕಾನತ್ತೂರಿನಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಲಿತ ನಾಯ್ಕ, ಆನಂದ ಕೌಡಿಚ್ಚಾರ್, ಪುಷ್ಪಾ ಕೌಡಿಚ್ಚಾರ್, ಕು.ಆಶಾ, ರಾಜು ಹೊಸ್ಮಠ ರ ಜೊತೆಗಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!