ಹಕ್ಕುಪತ್ರ ನೀಡುವಂತೆ ಗ್ರಾ.ಪಂ. ಗೆ ಮನವಿ.

ಪುತ್ತೂರು: (ಅ.18) ಬೆಳ್ಳಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು ಎಂಬಲ್ಲಿ  ಸುಮಾರು 90 ವರ್ಷಗಳಿಂದ ಹಲವು ಕುಟುಂಬಗಳು ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ಕಟ್ಟಿ , ಕೃಷಿ ಕೆಲಸ ಕಾರ್ಯ ಮಾಡುತ್ತಿದ್ದು ಆದರೆ ಹಕ್ಕು ಪತ್ರ ಇಲ್ಲದೇ ಸರಕಾರದ ಸವಲತ್ತುಗಳನ್ನು ಪಡೆಯಲು ವಿಫಲವಾಗಿದ್ದು ಈ ಬಗ್ಗೆ ಹಿಂದೆ  ಪುತ್ತೂರು ಸಹಾಯಕ ಅರಣ್ಯ ಅಧಿಕಾರಿ ಯವರಿಗೆ ಲಿಖಿತ ದೂರು ನೀಡಿದ್ದು, ಸದ್ರಿಯವರು ಅರ್ಜಿಯನ್ನು ತಿರಸ್ಕರಿಸಿ ಹಿಂಬರಹ ನೀಡಿದ್ದು ಈ ಸಂಬಂಧ ಕೋಡಿಂಬಾಡಿ- ಬೆಳ್ಳಿಪ್ಪಾಡಿ ಅವಿಭಾಜಿತ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ರಾಮಚಂದ್ರ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಕಾರ್ಯದರ್ಶಿ ಶ್ರೀ ರಮೇಶ್ ಮತ್ತು ಸದಸ್ಯರಿಗೆ ಪಾದೆಕಲ್ಲು ನಿವಾಸಿಗಳು ಸೂಕ್ತ ಕಾನೂನಿನ ಮೂಲಕ ಪರಿಶೀಲಿಸಿ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು .

Kodimbady
ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಬು ಗೌಡ ಬಂಡಾರದ ಮನೆ, ಸದಸ್ಯರಾದ ಮನೋಹರ್ ಗೌಡ ಡಿ.ವಿ , ಜಗನ್ನಾಥ್ ಶೆಟ್ಟಿ ನಡುಮನೆ, ಭವಾನಿ ಸುಂದರ್, ಭವ್ಯ , ಮಾಜಿ ಸದಸ್ಯರಾದ ಜಯಪ್ರಕಾಶ್ ಬದಿನಾರು, ಮೋನಪ್ಪ ಗೌಡ ಪಮ್ಮನಮಜಲು, ಮುರಲಿಧರ ರೈ ಮತ್ತು ಪಾದೆಕಲ್ಲು ನಿವಾಸಿಗಳು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!