ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ತರಗತಿ ಬಹಿಷ್ಕಾರ – ಅತಿಥಿ ಉಪನ್ಯಾಸಕರ ಮನವಿ
ಸುಳ್ಯ : ( ಡಿ.14) ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ತರಗತಿ ಬಹಿಷ್ಕಾರಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ಅತಿಥಿ ಉಪನ್ಯಾಸಕರು ಬೆಂಬಲ ಸೂಚಿಸಿ ಡಿಸೆಂಬರ್ 14 ರಂದು

ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸುತ್ತಿರುವುದು
ಅನಿರ್ಧಿಪ್ಟಾವಧಿ ತರಗತಿ ಬಹಿಷ್ಕಾರಕ್ಕೆ ಮನವಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಡಾ| ಅಚ್ಯುತ ಪೂಜಾರಿ ಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರುಗಳಾದ ರಂಜಿತ್ ಪಿ.ಜೆ, ಶರಿತಾ, ಅನಿತಾ, ದೀಪಾ, ಪ್ರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.