ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ
ಪುತ್ತೂರು : (ಜ.26) ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿಯವರು ಧ್ವಜಾರೋಹಣವನ್ನು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಹನೀಫ್ ಮಧುರಾ ಗಣರಾಜ್ಯೋತ್ಸದ ಶುಭಾಶಯವನ್ನು ಕೋರಿದರು. ಶಿಕ್ಷಕಿ ಆಯಿಷತ್ ಸಾಬಿರ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು.

ಧ್ವಜರೋಹಣ ಸಂದರ್ಭದಲ್ಲಿ
ನಿರ್ದೇಶಕರಾದ ಅಹ್ಮದ್ ಕಬೀರ್, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್, ಆಡಳಿತಾಧಿಕಾರಿ ಮಹಮ್ಮದ್ ಸಾಮು, ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಶಿಕ್ಷಕಿಯರಾದ ಶ್ರೀಪ್ರಿಯಾ, ರೇಷ್ಮಾ, ನಿಶಾನ, ಶಮೀಮ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ರೋಹಿಣಿ, ಇಸ್ಮಾಯಿಲ್, ರಿತೀಶ್, ಇಬ್ರಾಹಿಂ,
ಶಿವ ಬಾಲನ್, ರಾಮ್ ಲಖನ್ ಉಪಸ್ಥಿತರಿದ್ದರು. ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ ಸ್ವಾಗತಿಸಿ, ಶಿಕ್ಷಕಿ ಶಮೀಮ ವಂದಿಸಿದರು.