ಮೋದಿಯವರ ಬಜೆಟ್ ಪೂರ್ವ ಸಮಾಲೋಚನೆ ಬಂಡವಾಳಶಾಹಿ ಸ್ನೇಹಿತರಿಗೆ ಸೀಮಿತವಾಗಿತ್ತು : ರಾಹುಲ್ ಗಾಂಧಿ

ನವದೆಹಲಿ : (ಜ.10) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಅವರ ಬಜೆಟ್ ಪೂರ್ವಭಾವಿ ಸಮಾಲೋಚನೆಯನ್ನು ಅವರ ಆಪ್ತವಲಯದ ಉದ್ಯಮಿ ಸ್ನೇಹಿತರು ಮತ್ತು ಅತಿ ಶ್ರೀಮಂತರ ಜೊತೆ ನಡೆಸಿದ್ದಾರೆಯೇ ಹೊರತು ರೈತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಜೊತೆ ಅಲ್ಲ ಎಂದು ಟೀಕಿಸಿದ್ದಾರೆ.

Modi's pre budget meeting

ನಿನ್ನೆ ದೆಹಲಿಯ ಕಚೇರಿಯಲ್ಲಿ  ಪ್ರಧಾನಿ ಮೋದಿಯವರು ಖಾಸಗಿ ಷೇರುದಾರರು, ಆರ್ಥಿಕ ತಜ್ಞರು, ಉದ್ಯಮದ ಬಂಡವಾಳ ಹೂಡಿಕೆದಾರರು, ಉದ್ಯಮಿಗಳು, ಕೃಷಿ ತಜ್ಞರ ಜೊತೆ ಸಭೆ ಸೇರಿ ಚರ್ಚಿಸಿ 2024ರಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಮಾಡಬೇಕಾದ ಸಾಧನೆ ಕುರಿತು ಅಭಿಪ್ರಾಯ ಕೇಳಿದ್ದರು.

Rahul Gandhi

ಅದಕ್ಕೆ ಇಂದು ರಾಹುಲ್ ಗಾಂಧಿ ಸೂಟ್ ಬೂಟ್ ಸರ್ಕಾರ್ ಎಂದು ಹ್ಯಾಶ್ ಟಾಗ್ ಕೊಟ್ಟು ಮೋದಿಯವರಿಗೆ ದೇಶದ ಮಧ್ಯಮ, ಬಡ ವರ್ಗದ ಜನರು, ರೈತರು, ಮಕ್ಕಳು, ಮಹಿಳೆಯರ ಸಮಸ್ಯೆಗಳು, ಅಭಿಪ್ರಾಯಗಳನ್ನು ಆಲಿಸಲು ಆಸಕ್ತಿಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!