ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಕಲ್ಲೇರಿ ಪರಿಸರದಲ್ಲಿ ಅಗತ್ಯ ಸಾಮಾಗ್ರಿಗಳ ವಿತರಣೆ.

ಬೆಳ್ತಂಗಡಿ :‍ (ಮೆ.01) ರಾಮ್ ಸೇನಾ (ರಿ) ಕರ್ನಾಟಕ ಇದರ ಸಂಸ್ಥಾಪಕ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕೋವಿಡ್-19 ಕೊರೊನಾ ಕುರಿತಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ, ಮಧ್ಯಮ ವರ್ಗದ ಮಂದಿಗೆ ಅನ್ನ ಆಹಾರ, ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆಯ ಕಾರ್ಯವು ಕಳೆದೊಂದು ತಿಂಗಳಿನಿಂದ ನಿತ್ಯನಿರಂತರವಾಗಿ ಭರದಿಂದ ಸಾಗುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಸೀಲ್ ಡೌನ್ ಆಗಿ ಸೂಕ್ಷ್ಮ ವಲಯವೆಂದು

Prasad attavar ramsena

ಗುರುತಿಸಲ್ಪಟ್ಟ ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಪರಿಸರದಲ್ಲಿ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಅಗತ್ಯ ಆಹಾರ ವಸ್ತುಗಳ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಮ್ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ರಾಜ್ಯ ಕಾರ್ಯದರ್ಶಿ ಮಂಜುನಾಥ ಕುಂದರ್, ಅವಿನಾಶ್ ಉಪಸ್ಥಿತರಿದ್ದರು. ಅಲ್ಲದೆ ಸಂಘಟನೆಯ ವತಿಯಿಂದ ಕಳೆದ ಕೆಲ ದಿನಗಳ ಹಿಂದೆ ಕೂಲಿಕಾರ್ಮಿಕರು, ನಿರಾಶ್ರಿತರಿಗೆ ರಾಮ್ ಸೇನಾ ಸಂಘಟನೆಯ ವತಿಯಿಂದ ನಿತ್ಯನಿರಂತರವಾಗಿ ಮಂಗಳೂರು ನಗರದಾದ್ಯಂತ ಅನ್ನ ಆಹಾರ ನೀಡಿ ಸಂಘಟನೆಯು ಮಾನವೀಯತೆ ಮೆರೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!