ಕಾಂಗ್ರೆಸ್ ಶಾಸಕ, ಸಂಸದರಿಂದ ತಲಾ 1 ಲಕ್ಷ ರೂ. ದೇಣಿಗೆ – ಡಿ.ಕೆ. ಶಿವಕುಮಾರ್

ಬೆಂಗಳೂರು : (ಮಾ.27) ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು ಮತ್ತು ಸಂಸದರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಆರ್ ಎಸ್‌ಎಸ್ ಹಾಗೂ ಬಿಜೆಪಿಯವರ ತರಹ ಬೀದಿಗಿಳಿದು ವಸೂಲಿ ಮಾಡುವುದಿಲ್ಲ. ಈ ರೀತಿ ಹಣ ಹಾಗೂ ದವಸ ಧಾನ್ಯ ಸಂಗ್ರಹಿಸಲು ನಮ್ಮ ಪಕ್ಷ ಪ್ರೋತ್ಸಾಹ ನೀಡುವುದಿಲ್ಲ ಎಂದರು.

Dk shivakumar

ನಮ್ಮ ಪಕ್ಷದ ಶಾಸಕರುಗಳು ಕೆಪಿಸಿಸಿ ರಿಲೀಫ್ ಫಂಡ್ ಗೆ ತಲಾ ಒಂದು ಲಕ್ಷ ಕೊಡಲೇಬೇಕು, ಇನ್ನೂ ಸಾಮರ್ಥ್ಯ ಇರುವವರು ಹೆಚ್ಚು ಕೊಡಬಹುದು ಎಂದರು. ಕೊರೋನಾ ಸೋಂಕು ನಿಯಂತ್ರಣ ವಿಚಾರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರೆ ನಾಯಕರುಗಳು ರಾಷ್ಟ್ರ ಮಟ್ಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ.

ರಾಜ್ಯದಲ್ಲಿ ನಾವೂ ಕೂಡ ಸರ್ಕಾರದ ಜತೆ ನಿಲ್ಲುತ್ತೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಸರ್ಕಾರ ತೆಗೆದುಕೊಂಡಿರುವ ಅನೇಕ ಕಾರ್ಯಕ್ರಮ, ಘೋಷಣೆಗಳಿಗೆ ನಮ್ಮಿಂದ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗಿದೆ. ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಹೀಗೆ ವರ್ತನೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ಫ್ಯೂ ನೆಪ ಮಾಡಿಕೊಂಡು ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು ಎಂದು ಡಿಕೆಶಿ ಸರ್ಕಾರಕ್ಕೆ ಒತ್ತಾಯಿಸಿದರು.

CATEGORIES
TAGS
Share This

COMMENTS

Wordpress (2)
  • comment-avatar
    Raja n 4 years

    ಹೋಟೆಲ್ ಕಾರ್ಮಿಕರು ಪಾಡೇನು ಅವರಿಗೆ ಯಾವುದೇ ಸಹಾಯ ಸಹಾಯಕ ಸರ್ಕಾರ ಕೊಟ್ಟಿಲ್ಲ ಊರು ಬಿಟ್ಟು ಬಂದು ಕೆಲಸ ಮಾಡಿ ಊರಿನಲ್ಲಿರುವ ಹಿರಿಯರಿಗೆ ಇವರ ಸಂಬಳದಲ್ಲಿ ವ್ಯವಸಾಯಕ್ಕೆ ಸಾಲ ಮಾಡಿ ಅದನ್ನು ಇವರ ಸಂಬಳದಲ್ಲಿ ಕಟ್ಟುವವರಿಗೆ ಏನಾದರೂ ಪರಿಹಾರ ಕೊಟ್ಟರೆ ಅನುಕೂಲ ಹಾಗೆ ಬಾಡಿಗೆ ಆಟೋ ಓಡಿಸುವವರಿಗೂ ಏನಾದರೂ ಸಹಾಯ ಮಾಡಿದರೆ ಅವರಿಗೂ ಅನುಕೂಲಕರ ಇಂತಹ ಅನೇಕರನ್ನು ಗಮನಿಸಿ ಅವರಿಗೆ ಸಹಾಯ ಮಾಡಿ ಈಗಾಗಲೇ ಕೂಲಿ ಕಾರ್ಮಿಕರನ್ನು ಗಮನಿಸಿದ ಹಾಗೆ ಇವರನ್ನು ಗಮನಿಸಿ ಮತ್ತು ಅಡುಗೆ ದಿನಗೂಲಿ ಕಾರ್ಮಿಕರು ಇದ್ದಾರೆ,ಮದುವೆ ಆಮಂತ್ರಣ ಇತ್ಯಾದಿ ಪ್ರಿಂಟಿಂಗ್ ಮಾಡುವ ಕಾರ್ಮಿಕರು ಇಂತಹವರಿಗೆ ಸಹಾಯ ಮಾಡಿದರೆ ಅದು ಖಂಡಿತವಾಗಿ ಸೇರಬೇಕಾದವರಿಗೆ ಸೇರಿದಂತೆ ದಯವಿಟ್ಟು ಇಂತಹವರನ್ನು ಗಮನಿಸಿ

  • Disqus ( )
    error: Content is protected !!